Wednesday, 11 March 2009

ನನ್ನ ಹುಚ್ಚು


ನಿನ್ನ ಮೇಲೆ ಪ್ರೀತಿ ಹೆಚ್ಚಾಗಿ ನಾ ಕವಿತೆಗಳ ಗೀಚುವಾಗ
ಅನಿಸುವುದು ಈ ಹುಚ್ಚು ನನಗೇಕೆಂದು

ಆದರೆ ಕವಿಯಿಲ್ಲದೆ ಕವಿತೆಗೆ ನೆಲೆ ಎಲ್ಲಿ
ಕವಿತೆಯಿಲ್ಲದೆ ಶಬ್ದಗಳಿಗೆ ಬೆಲೆ ಎಲ್ಲಿ

ಕವಿತೆ ಯಾರೂ ಓದದಿದ್ದರೂ ನನಗೇನು
ಶಬ್ದಗಳು ಇಲ್ಲದೆ ಮೌನವಾದರೇನು
ನಿನಗೆ ಕೇಳಿದರೆ ಸಾಕು ನನ್ನ ಹೃದಯದ ಕೂಗು

---
ರಚನೆ -- ಕುಮಾರ್ ಕೆ.ಎಸ್.

No comments:

Post a Comment