Wednesday, 14 January 2015

Monday, 11 August 2014

ಇನ್ನಾದರೂ ಹೇಳಬಾರದೆ !!!


My poem published for Kannada Sangha, Singapore in 2011

ಕೆ೦ಪು

============

 

ಕೆ೦ಪು !  ಅ೦ದಹೂವ೦ತ ಮಗುವ ತುಟಿಗಳ ಮೇಲೆ

ಮಗುವ ಮುಗುಳ್ನಗು ಚ೦ದದಾ ಹೂವ ಸರಮಾಲೆ

 

ಕೆ೦ಪು !  ಅ೦ದಮಕರ೦ದ ತು೦ಬಿದ ಶಲಾಖೆಗಳ ಮೇಲೆ

ಚ೦ದವದು  ಅರಳಿದಾಗ ಮರದ ಶಾಖೆಗಳ ಮೇಲೆ

 

ಕೆ೦ಪು ! ಆಗಲಿ ನಾರಿಯ ಸಿ೦ಗಾರದಾ ಸಿ೦ಧೂರ

ಆಗದಿರಲಿ,  ಆ ಸಿರಿಯ ಅಳಿಸುವ ಯಮನ ಶರಪ೦ಜರ

 

ಕೆ೦ಪು !  ಇರಲಿ ಆ ಸಿರಿಯ ನೀಡಿದ ದೇವನಿಗಿಡುವ  ಹೂವುಗಳ ಮೇಲೆ

ಚೆಲ್ಲದಿರಲಿ ನೆತ್ತರು ಆ ದೇವರ ಹೆಸರ ಮೇಲೆ

 

ಕೆ೦ಪು ! ಪಸರಿಸಲಿ ರ೦ಗೋಲಿ ಹಾಕುವ ಹೊತ್ತಲಿ ಬಾನ೦ಗಳದ೦ತೆ

ಹರಿಯದಿರಲಿ ,  ಹೊಡೆದಾಡುತ ಮನೆಯ೦ಗಳದ ಮು೦ದೆ

 

ಕೆ೦ಪಾಗದಿರಲಿ ಕಣ್ಣುಹ್ರುದಯಗಳ ಮಧ್ಯೆ ಹಗೆಯ ತು೦ಬುತ

ಇ೦ಪಾಗಲಿ ಪ್ರೇಮ ಸ೦ದೇಶ,  ವಿಶ್ವ ಶಾ೦ತಿಯ ಜ್ಯೋತಿಯ ಹಚ್ಚುತ

 

----------------------------------------------------------------------

 

ರಚನೆ- ಶಿವಕುಮಾರ್ ಕರಿಸಿದ್ದಪ್ಪ

 

 


Thursday, 14 May 2009

ನಿನ್ನ ಕಾಯುವ ದಾರಿಯಲಿ

ನೀ ಕಾಣದ ದಿನಗಳು
ನನಗೆ ಹೇಗೆನುಸುತಿದೆ ಎಂದು ನಾ ಹೇಗೆ ಹೇಳಲಿ ನಿನಗೆ

ಗಾಳಿ ಬೀಸುವುದು ಈ ಕ್ಷಣದಿ ನಿಂತಂತೆ
ಕುಡಿವ ನೀರು ತುಟಿಗೆ ತಾಗುವಾಗಲೇ ಇಂಗಿ ಹೋದಂತೆ
ಕುದಿಯುತಿದೆ ಈ ಹೃದಯ ನಿನ್ನ ವಿರಹದ ಬೇಗೆಯಲಿ
ಬೇಗನೆ ಬಳಿ ಬಂದು ಈ ದುಗುಡ ನೀ ದೂದಬಾರದೇ

ನಿನ್ನ ನೆನಪಲ್ಲಿ ಬಿಟ್ಟ ನಿಟ್ಟುಸಿರುಗಳು
ನಮ್ಮ ಬಿಸಿಯುಸಿರಗಳ ಮರೆಯುಸಿತಿದೆ
ನಿನ್ನ ಕಾಯುವ ದಾರಿಯಲಿ
ನನ್ನ ಕಾಯವೆ ಕರಗಿ ಹೋಗುತಿದೆ

Tuesday, 28 April 2009

ಮಂದಿರಕಾಗಿ

ಮಂದಿರಕಾಗಿ ಹೃದಯಗಳ ನಡುವೆ ಕಂದರವೇಕೆ

ತೀರ್ಥಗಳಿಗಾಗಿ ರಕ್ತ ಹರಿಯಬೇಕೆಕೆ

ರಾಮ ನಿರುವಲ್ಲಿ ಪ್ರೆಮವಿರುವುದು
ಪ್ರೇಮ ಇರುವಲ್ಲಿ ರಾಮನಿರುವನು

ರಾಮನ ಹೆಸರಲ್ಲಿ ಜನರ ನಡುವೆ ಕಲಹವೇಕೆ




ನಿನ್ನ ಮೊಗ ನೋಡಿ ನಾ ಕವಿತೆ ಬರೆಯುವುದಿಲ್ಲ

ನಿನ್ನ ಮೊಗ ನೋಡಿ ನಾ ಕವಿತೆ ಬರೆಯುವುದಿಲ್ಲ
ನಿನ್ನ ಮುಖ ಬದಲಾಗುವುದು ವಯಸಿನ ಜೊತೆ

ನಿನ್ನ ಮನ ನೋಡಿ ನಾ ಕವಿತೆ ಬರೆಯಲಿಲ್ಲ
ಏಕೆಂದರೆ ನಿನ್ನ ಮನವೂ ನಿಮಿಷಕೊಮ್ಮೆ ಬದಲಾಗುವುದಲ್ಲ !!!

ನೀ ಕೇಳಿದಾಗ ನಿನಗಾಗಿ ಬರೆದ ಕವಿತೆಗಳಿಗೆ ನೀ ಸ್ಫೂರ್ತಿ ಹೇಗೆಂದು
ನನ್ನ ಉತ್ತರ ಒಂದೇ , ಸ್ಪೂರ್ತಿ ಇರುವುದು ಗೆಳತಿಯ ಮುಖದಲಲ್ಲ
ಕವಿತೆ ಹುಟ್ಟುವುದು ಕವಿಯ ಮನದಲ್ಲಿ , ಅವನ ಹೃದಯದಲ್ಲಿ

ನಿನ್ನಗಾಗಿ ಬರೆದ ಕವಿತೆ ನೀ ಓದದಿದ್ದರೂ
ಕವಿಯ ಸ್ಪೂರ್ತಿಯು ಬಂದು ಕವಿಯ ಬಾಳಲಿ ಇರದಿದ್ದರೇನು
ಸ್ಫೂರ್ತಿ ನಶಿಸುವದು ಆದರೆ ಕವಿತೆ ಉಳಿಯುವುದು
ಕವಿಯೂ ಸಾಯುವನು ಒಂದು ದಿನ , ಆದರೆ ಅವನ ಕವಿತೆಗಳು ಚಿರಂತನ

ಪ್ರೇಮ ಅಮರ , ಪ್ರೇಮಿಗಳಲ್ಲ

ನಾ ಬರೆದ ಕವಿತೆಗಳ ಹರಿದು ನೀ ಎಸೆದರೇನು
ನಾ ಮಾಡುವ ಕರೆಗಳ ನೀ ಉತ್ತರಿಸಿದಿದ್ದರೆನನು

ಆದರೆ ಈ ಹೃದಯದಲ್ಲಿ ನಿನ್ನ ನೀ ಅಳಿಸಲಾಗುವುದೇ ನಿನಗೆ

ಪ್ರೇಮಿಗಳು ನಶಿಸುವರು ಒಂದು ದಿನ
ಆದರೆ ಪ್ರೀತಿಯೊಂದೆ ಅಮರ

ಸ್ನೇಹಿತರೊಂದು ದಿನ ದೂರಾಗಬಹುದು
ಆದರೆ ಸ್ನೇಹವನ್ನು ಅಳಿಸಲಾಗದು ಎಂದು