ಕೆ೦ಪು
============
ಕೆ೦ಪು ! ಅ೦ದ, ಹೂವ೦ತ ಮಗುವ ತುಟಿಗಳ ಮೇಲೆ
ಮಗುವ ಮುಗುಳ್ನಗು ಚ೦ದದಾ ಹೂವ ಸರಮಾಲೆ
ಕೆ೦ಪು ! ಅ೦ದ, ಮಕರ೦ದ ತು೦ಬಿದ ಶಲಾಖೆಗಳ ಮೇಲೆ
ಚ೦ದವದು ಅರಳಿದಾಗ ಮರದ ಶಾಖೆಗಳ ಮೇಲೆ
ಕೆ೦ಪು ! ಆಗಲಿ ನಾರಿಯ ಸಿ೦ಗಾರದಾ ಸಿ೦ಧೂರ
ಆಗದಿರಲಿ, ಆ ಸಿರಿಯ ಅಳಿಸುವ ಯಮನ ಶರಪ೦ಜರ
ಕೆ೦ಪು ! ಇರಲಿ ಆ ಸಿರಿಯ ನೀಡಿದ ದೇವನಿಗಿಡುವ ಹೂವುಗಳ ಮೇಲೆ
ಚೆಲ್ಲದಿರಲಿ ನೆತ್ತರು ಆ ದೇವರ ಹೆಸರ ಮೇಲೆ
ಕೆ೦ಪು ! ಪಸರಿಸಲಿ ರ೦ಗೋಲಿ ಹಾಕುವ ಹೊತ್ತಲಿ ಬಾನ೦ಗಳದ೦ತೆ
ಹರಿಯದಿರಲಿ , ಹೊಡೆದಾಡುತ ಮನೆಯ೦ಗಳದ ಮು೦ದೆ
ಕೆ೦ಪಾಗದಿರಲಿ ಕಣ್ಣು, ಹ್ರುದಯಗಳ ಮಧ್ಯೆ ಹಗೆಯ ತು೦ಬುತ
ಇ೦ಪಾಗಲಿ ಪ್ರೇಮ ಸ೦ದೇಶ, ವಿಶ್ವ ಶಾ೦ತಿಯ ಜ್ಯೋತಿಯ ಹಚ್ಚುತ
----------------------------------------------------------------------
ರಚನೆ- ಶಿವಕುಮಾರ್ ಕರಿಸಿದ್ದಪ್ಪ
No comments:
Post a Comment