Thursday, 12 March 2009

ಇನ್ನಾದರೂ ಹೇಳಬಾರದೇ !!!

ಎಲ್ಲೊ ಹುಟ್ಟಿ ಎಲ್ಲೊ ಬೆಳೆದು
ಒಂದು ದಿನ ಪರಿಚಯವಾದಾಗ
ಹೇಳಬಹುದು ಅಂದು ಸ್ನೇಹ ಶುರುವಾಯಿತೆಂದು

ನನ್ನ ಒಡನಾಟ ನಿನಗೆ ಹಿಡಿಸಿ
ನಿನ್ನ ಸಹವಾಸ ನನಗೆ ಹಿತವಾಗಿ
ನಿನ್ನೊಡನೆ ಮಾತನಾಡದ ದಿನ ಬರಡೆನಿಸಲು
ನನಗೆ ತಿಳಿಯದಾಯಿತು ಇದು ಏನೆಂದು

ನಾನೆಂದರೆ ನಿನಗಿಷ್ಟ ಎಂದು ನೀ ಅಂದಾಗ
ಮಾತಾಡುತ ಹೊತ್ತು ಕಳೆದದ್ದೇ ಕಾಣದಿದ್ದಾಗ
ಎಲ್ಲೋ ಒಂದು ಕಡೆ ಹೃದಯದಲ್ಲಿ ವಿಶೇಷ ಭಾವಗಳ ರಾಗ
ಬೇರೆ ಯಾರಲ್ಲೂ ಕಾಣದ ಉತ್ಸಾಹ ನಿನ್ನೊಡನಿದ್ದಾಗ


ಇದು ಪ್ರೇಮವೆಂದು ಅನಿಸುವುದು ಒಮ್ಮೆ
ನೋಡುತ್ತಲೇ ಕೂರಬೇಕೆನೆಸುವುದು ನಿನ್ನನ್ನೇ
ಕೇಳುತ್ತಲೇ ಇರಬೇಕೆನಿಸುವುದು ನಿನ್ನ ಮಾತನ್ನೇ
ನಿನಗೂ ಹಾಗೆನಿಸಿದರೆ ಸ್ವರ್ಗ ಇರುವುದೆನಿಸುವದು ನನ್ನ ಕೈಯಲ್ಲೇ
ಇನ್ನಾದರೂ ಹೇಳಬಾರದೆ ನೀನೂ ನನ್ನ ಪ್ರೀತಿಸುವೆನೆಂದು ಓ ನನ್ನ ನಲ್ಲೆ !!!
---
ರಚನೆ -- ಕುಮಾರ್ ಕೆ.ಎಸ್.

No comments:

Post a Comment