Saturday, 28 March 2009

ನನ್ನ ಪ್ರೀತಿಗೆ ನೀ ಕಾರಣವಲ್ಲ

ನಾ ನಿನ್ನ ಪ್ರೀತಿಸಲು ಕಾರಣವಲ್ಲ ನೀನು ಹೇಗಿರುವೆಯಂದು
ನನ್ನ ಪ್ರೀತಿಯ ಕಾರಣ ನೀ ನಿನ್ನ ಜೊತೆಯಿರುವಾಗ
ನಾನು ಹೇಗಿರುವೆನೆಂದು

ನೀ ಜೊತೆಯಿರಲು ಅನಿಸುವುದು
ನಾ ಆಗಸದಿ ತೇಲುತಿರುವೆನೆಂದು
ನಿನ್ನ ಸ್ಫೂರ್ತಿಯ ನುಡಿಗೆ
ಅನಿಸುವುದು ಜಗವನೆ ಜಯಿಸಬಲ್ಲೆನೆಂದು

ನಮ್ಮ ಕೈಗಳೆರಡು ಬೆಸೆದಾಗ
ಅನಿಸುವುದು ಬಯಸಿದೆಲ್ಲವು ಸಿಗುವುದೆಂದು
ನಮ್ಮ ಕಂಗಳೆರಡು ಬೆರೆತಾಗ
ಅನಿಸುವುದು ಜಗವು ಇಲ್ಲೇ ನಿಂತುಬಿಡಲೆಂದು

---
ರಚನೆ -- ಕುಮಾರ್ ಕೆ.ಎಸ್.

No comments:

Post a Comment